ಮೈಸೂರು ಸೀತಾರಾಮಶಾಸ್ತ್ರಿ
1863-1933. ಸಂಸ್ಕøತ ಮತ್ತು ಕನ್ನಡದಲ್ಲಿ ಪಂಡಿತರಾಗಿದ್ದ ಇವರು ಮೈಸೂರು ಅರಮನೆಯ ಆಸ್ಥಾನ ವಿದ್ವಾಂಸರಾಗಿದ್ದರು. ಹಳ್ಳದಕೇರಿ ಸೀತಾರಾಮಶಾಸ್ತ್ರಿಗಳೆಂದೂ ಪ್ರಸಿದ್ಧರಾಗಿದ್ದ ಇವರು ಮೈಸೂರಿನ ಹಳ್ಳದಕೇರಿಯಲ್ಲಿ 26-10-1868ರಲ್ಲಿ ಜನಿಸಿದರು. ಕತ್ತವಾಡಿಪುರ ಅಗ್ರಹಾರದ ಪಂಡಿತ ಚಂದ್ರಶೇಖರಶಾಸ್ತ್ರಿಗಳಲ್ಲಿ ಸಂಸ್ಕøತ ಮತ್ತು ಕನ್ನಡ ವ್ಯಾಸಂಗವನ್ನು ಮಾಡಿದರು. ಮೈಸೂರು ಸದ್ವಿದ್ಯಾಪಾಠಶಾಲೆಯಲ್ಲಿ ಉಪಾಧ್ಯಾಯರಾಗಿ ವೃತ್ತಿಜೀವನ ಆರಂಭಿಸಿದ ಇವರು ಅನಂತರ ಮೈಸೂರು ಟ್ರೈನಿಂಗ್ ಇವರು ಸಂಸ್ಕøತದಿಂದ ಅನೇಕ ಗ್ರಂಥಗಳನ್ನು ಕನ್ನಡಕ್ಕೆ ತಂದಿದ್ದಾರೆ. ಭಾಸನ ಪ್ರತಿಮಾನಾಟಕ ಇವರ ಮೊದಲ ಅನುವಾದ ಕೃತಿ. ಹೃದ್ಯವಾದ ಕಂದವೃತ್ತಗಳಿಂದ ಕೂಡಿರುವ ಈ ಕೃತಿ ಈಗಲೂ ಅಧ್ಯಯನ ಯೋಗ್ಯವಾಗಿದೆ. ವೇಣೀಸಂಹಾರ ನಾಟಕವನ್ನು ಪೂರ್ಣವಾಗಿ ಹಳಗನ್ನಡ ಗದ್ಯಪದ್ಯಗಳಲ್ಲಿ ಕನ್ನಡಿಸಿದ್ದಾರೆ. ಈ ಕೃತಿ ಹಳಗನ್ನಡ ಛಂದೋಬಂಧಗಳ ಹಾಗೂ ಪ್ರಯೋಗಗಳ ಮೇಲೆ ಇವರಿಗಿದ್ದ ಪ್ರಭುತ್ವಕ್ಕೆ ಸಾಕ್ಷಿಯಾಗಿದೆ.

ಇಂದ್ರಕೀಲವಿಜಯ, ಕರ್ಣಾಟಕ ಮಹೀಶೂರ ದೇಶಾಭ್ಯುದಯ, ಕರ್ಣಾಟಕ ವಿಕ್ರಮಾರ್ಕಚರಿತಮ್, ಕುಚೇಲೋಪಾಖ್ಯಾನ, ಕೃಷ್ಣಸಂಧಾನ, ಚತುರ್ದಶಮಂಜರಿ, ತರಂಗಿಣೀ ನವರತ್ನದರ್ಪಣ, ಪದ್ಯಕದಂಬ ಪ್ರಶ್ನೋತ್ತರ ಭಗವದ್ಗೀತಾ, ಪಾರ್ವತೀಪರಿಣಯ ನಾಟಕ, ಪಂಚತಂತ್ರ, ಭಕ್ತಿವಿಜಯ, ಬಾಲರಾಮಾಯಣ, ಭಜಗೋವಿಂದ, ಲಲಿತಾಸಹಸ್ರನಾಮ ಚಂದ್ರಿಕೆ, ಸುದಾಮಚರಿತೆ, ಹಾಲಾಸ್ಯ ಮಹಾತ್ಮೆ-ಇವು ಇವರ ಇತರ ಕೃತಿಗಳು. ಸಂಸ್ಕøತದಲ್ಲಿ ಹತ್ತಾರು ಕಾನ್ಯಸ್ತೋತ್ರಾದಿಗಳನ್ನೂ ಇವರು ರಚಿಸಿದ್ದಾರೆ.

ಆಸ್ತಿಕರೂ ಆಚಾರವಂತರೂ ಆಗಿದ್ದ ಶಾಸ್ತ್ರಿಗಳು 20-12-1933ರಲ್ಲಿ ನಿಧನ ಹೊಂದಿದರು.	
	(ಕೆ. ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ